ಶನಿವಾರ, ನವೆಂಬರ್ 6, 2010

ಹದಿಹರೆಯದ ತರುಣಿಗೆ

ನನ್ನ ಆತ್ಮೀಯಳೇ..
ನನ್ನ ಪ್ರೀತಿಯವಳೇ..
ನನಗೆ ತಿಳಿದಿದೆ
ಬೇರೆಯವರಿಗಿಂತಲೂ ಹೆಚ್ಚಾಗಿ
ಏಕೆ ನಿನ್ನ ಹೃದಯ ಹೆಚ್ಚಾಗಿ ಬಡಿದುಕೊಳ್ಳುತ್ತಿದೆಯೆಂದು
ನಿನ್ನ ಹೆತ್ತ ತಾಯಿಗೂ ಗೊತ್ತಿಲ್ಲದಷ್ಟು
ನನಗೆ ತಿಳಿದಿದೆ;
ಯಾರಿಗಾಗಿ ನನ್ನ ಹೃದಯ ಒಡೆಯಿತು
ನನ್ನವಳಿಗಾಗಿ;
ಯಾವಾಗ ಅವಳ ಕ್ರೊರ ಭಾವನೆ ಹೊರಬಿದ್ದಿತೋ;
ಬೇರೆ ಹೃದಯಕ್ಕೆ ಅವಳ ಕಣ್ಣುಗಳು ಕಾತರಗೊಂಡವೋ
ಆಗಲೇ ತಿಳಿದುಹೋಯಿತು ನನಗೆ;
ನಿನ್ನ ಬಗ್ಗೆ ಬೇರೆಯವರಿಗಿಂತಲೂ ಹೆಚ್ಚಾಗಿ ತಿಳಿದಿದೆ ನನಗೆ.

ಪ್ರೇರಣೆ:"To a Young Girl" by William Butler Yeats

ಕಳೆದುಕೊಂಡಿದ್ದೇನು?


ನಾನು ಹಾಡುತ್ತೇನೆ
ನಾನು ಕಳೆದುಕೊಂಡಿದ್ದೇನೆಂದು;
ನಾನು ಗೆದ್ದಿದ್ದು ಏನೆಂದು;
ನಾನು ನಡೆದ ದಾರಿಯ
ನಾನು ಕಂಡ ಯುದ್ಧ ಭೂಮಿಯ ರೀತಿಯನ್ನು;
ನನ್ನ ದೊರೆಯೋ! ಸೋಲುಂಡವನು;
ನನ್ನ ಗೆಳೆಯರೋ! ಸೋತ ಸೈನಿಕರು;
ಕಾಲು ಮಾತ್ರ ನಿಲ್ಲದೆ ತೆವಳುತ್ತಿದೆ
ಸರಿಯಿದ್ದವರು ಓಡುತ್ತಿದ್ದಾರೆ;
ಅವರು ಯಾವಾಗಲೂ ಅದೇ ಸಣ್ಣ ಕಲ್ಲನ್ನೇ ಬಿಸುಟುತ್ತಾರೆ;
ನಾನು ಹಾಡುತ್ತೇನೆ
ನಾನು ಕಳೆದುಕೊಂಡಿದ್ದೇನೆಂದು;

ಪ್ರೇರಣೆ:""What was lost" by William Butler Yeats

ನಿನಗೆ ವಯಸ್ಸಾದಾಗ

ಯಾವಾಗ ನಿನಗೆ ವಯಸ್ಸಾಗುವುದೋ!;
ತಲೆಗೂದಲು ನೆರೆಯುವುದೋ!;
ನಿದ್ದೆ ಎಡನಿಡದೇ ಕಾಡುವುದೋ!;
ಎಲ್ಲಕ್ಕೂ ನಿನಗೆ ಒಪ್ಪಿಗೆ ಇದ್ದಲ್ಲಿ ಈ ಪುಸ್ತಕ ತೆಗೆದು ಕೋ;
ನಿನ್ನ ಕಂಗಳಲ್ಲಿ ಒಮ್ಮೆ ಹಿಂದಿನದೆಲ್ಲವನ್ನೂ ನೆನಪಿಸಿ ಕೋ;
ಈ ಪುಸ್ತಕದ ಒಳಹೊಕ್ಕು ನೋಡು;
ಎಷ್ಟು ಅಹ್ಲಾದಕರ ಸನ್ನಿವೇಶಗಳು ಬಂದವು, ಹೋದವು;
ನಿನ್ನ ಪ್ರೀತಿಸಿದರು ಅಥವಾ ದ್ವೇಷಿಸಿದರು
ದೇಹ ಹಾಗು ಮನಸ್ಸಿನ ಸುಂದರತೆಗೆ ಸೋತು;
ಆದರೆ ಒಬ್ಬ ಮಾತ್ರ ಎಡಬಿಡದೆ ನಿನ್ನ ಪ್ರೀತಿಸಿದ
ಅದೇ ನಿನ್ನಯ ಪವಿತ್ರ ಯಾತ್ರಿಕ ಆತ್ಮ;
ಬದಲಾದ ನಿನ್ನಯ ಚರ್ಯಯ ಕಣ್ಣೀರಿನ ವ್ಯಥೆಗೆ
ಮರುಗಿ ನಿನ್ನನ್ನು ಪ್ರೀತಿಸಿದವನು;
ನಿನ್ನ ಎಲ್ಲಾ ಸನ್ನಿವೇಶಗಳಿಗೂ ನಿನ್ನೊಡನಿದ್ದು ಬಾಗಿ
ನಡೆದು ಜೊತೆಯದವನು;
ನಿನ್ನ ನೋವಿನ ನರಳಾಟಕ್ಕೆ ಎಷ್ಟು ಪ್ರೀತಿಧಾರೆ ಹರಿಯಿತು;
ಬಾನಿನೆತ್ತರಕ್ಕೆ ಹಿಮಾಲಯ ಪರ್ವತ ದಾಟಿ
ನಿನ್ನ ಮುಖವನ್ನು ತಾರೆಗಳ ಮಧ್ಯದಲ್ಲಿ ಹುದುಗಿಸಿದವನು;
ನೀನು ಮಾತ್ರ ಬಲ್ಲೆ
ಎಲ್ಲವೂ ಕನಸಿನಂತೆ ಕರಗುತಿದೆ
ನಿನಗೆ ವಯಸ್ಸಾಗುತ್ತಿದೆ
ಕಡೆಯ ಕರೆ ಅವನಿಂದ ಬರುವುದ ನೀ ಕಾಯುತ್ತಿರುವೆ ಮೌನವಾಗಿ;
ಪ್ರೇರಣೆ:"When you are old" by William Butler Yeats.